ಗುರುವಾರ, ಜೂನ್ 24, 2021

ಅಂತರ್ಜಾಲ ಅವೃತ್ತಿಯ ಮುನ್ನಿನ ಮಾತು


ಬ್ಲಾಗರ್ ಖಾತೆಯ ಪ್ರೇರೇಪಣೆಯೊಂದಿಗೆ, ಎಷ್ಟೋ ವರ್ಷಗಳ ಮುನ್ನ ಮೈಸೂರಿನ ಸುಪ್ರಸಿದ್ಧ ’ಗೀತಾ ಬುಕ್ ಹೌಸ್’ ಪ್ರಕಟಿಸಿ ಈಗ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ನನ್ನ ಗ್ರಂಥ ’ಮರುಭೂಮಿ’ಯ ಆನ್-ಲೈನ್ ಪ್ರಕಟಣೆಯ ಕಾಯಕಕ್ಕೆ ಚಾಲನೆ ನೀಡುತ್ತಿದ್ದೇನೆ.

ವಿದ್ಯಾರ್ಥಿದೆಸೆಯ ತರುವಾಯ ವೃತ್ತಿಪರನಾಗುವ ಮುನ್ನ, ಶಾಲಾ ಶಿಕ್ಷಕಿಯಾಗಿದ್ದ ನಮ್ಮಮ್ಮನಿಗೆ ಗ್ರಾಮವೊಂದರಲ್ಲಿ ಓರ್ವ ಅಸಹಾಯಕ ವ್ಯಕ್ತಿ ಸ್ವತಃ ವಿವರಿಸಿದ್ದನ್ನು ಆಧರಿಸಿ ನಾನು ಬರೆದ ಸಾಮಾಜಿಕ ಕಾದಂಬರಿಯಿದು .

ಮೂಲತಃ ನಿರೂಪಿಸಲಾದ ಇದರ ಮುಖಪುಟದ ಕಲಾಕೃತಿ ಲಭ್ಯವಿರಲಿಲ್ಲ. ಆ ನಿಮಿತ್ತ, ನನ್ನ ಸೋದರಮಾವ ದಿ. ಟಿ ಆರ್ ವರಾಹಮೂರ್ತಿ ಅವರು ಗ್ರಂಥದ ಸಮಗ್ರತೆಯನ್ನು ಗ್ರಹಿಸಿ ಅಕರಾಸ್ತೆಯಿಂದ ಬರೆದುಕೊಟ್ಟ ವರ್ಣಚಿತ್ರ ಈ ಅವೃತ್ತಿಯ ಆರಂಭದ ಪುಟವನ್ನು ಅಲಂಕರಿಸುತ್ತಿದೆ.

- ಬಿ. ಎಸ್. ರಂಗನಾಥ್


ಅಭಿಪ್ರಾಯ ಮಾಲಿಕೆ
ಅಧ್ಯಾಯ - 7ರ ವಾಚನಾನಂತರ

[30/06, 07:59] Harishchandra Bhat: So far so good! Doesn't need any corrections. Narration is excellent! It has thoughts of clarity!
[30/06, 08:03] Harishchandra Bhat: I haven't used the reverse reading process for proof.

[30/06, 08:12] BS Ranganath: Many thanks for your opinion.

* * *

30/06, 07:54] R Sudarshan: Read with interest. You express so well. And I Know It Is Not Easy To Write A Novel Sized Story, It takes a lot of patience, continuity in thinking and determination. So, this is truly remarkable that you could write and complete. I don't have much comments on the terms, except two points.

1 The narration is mostly about the past sentence and so, it falls short of provoking the reader about the characters. The writer of some use of tense-less thought process would have helped.

2. Narration doesn't use conversation and that makes reading a little difficult. I know a lot of award-winning authors use not only descriptive narration but a general reader, interspersed conversation that makes the narrative look real and relatable. By the way, comments are basically my personal preference as a reader and not reflective of the quality of writing, which is nice.

[30/06, 08:13] BS Ranganath: Thanks for pointing out the areas of deficiency. As I wrote it during my early days of life, essence of professional experience (which would have gone into it if written today) must be missing in it.

* * *

ವಿಮರ್ಶೆ
ನಿಜ ಜೀವನದ ಪ್ರತಿಬಿಂಬಗಳು. ನಮ್ಮ ಸುಪ್ರಸಿದ್ಧ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರರು ಹೇಳುವಂತೆ ನನ್ನ ಆತ್ಮೀಯ ಮಿತ್ರ ರಂಗನಾಥ ಅವರ ಮರುಭೂಮಿ ಕಾದಂಬರಿಯ ಕಥೆ ಎಲ್ಲಿಯಾದರೂ ಜನಸಾಮಾನ್ಯರಲ್ಲಿ ನಡೆಯಬಹುದು. ಅದೇ ಈ ಕಾದಂಬರಿಯ ವೈಶಿಷ್ಟ್ಯ. ಗೊರೂರು ಅವರಂಥ ಧೀಮಂತರು ಮುನ್ನುಡಿ ಬರೆದು ಕೊಟ್ಟಿರುವುದೇ ಇನ್ನೊಂದು ವೈಶಿಷ್ಟ್ಯ.  ಕಾದಂಬರಿಯಲ್ಲಿ ಹುರುಳಿದ್ದುದರಿಂದಲೇ ಅವರು ಮುನ್ನುಡಿ ಬರೆದು ಕೊಟ್ಟಿರುವುದು.

ಮನುಷ್ಯ ಮನುಷ್ಯರ ನಡುವಿನ   ಸಂಬಂಧಗಳು  ಅನೇಕ ಸಲ  ಕ್ಲಿಷ್ಟ. ಸಂಕೀರ್ಣ. ಅವುಗಳಿಗೆ ಬಹಳಷ್ಟು ಸಲ ತಾರ್ಕಿಕ ಅಥವಾ ವೈಜ್ಞಾನಿಕ ವಿವರಣೆ ಕೊಡಲು ಆಗದು. ಆದರೂ ಅವು ಸಹಜ. ನೈಸರ್ಗಿಕ. ಇದು ವಿಶೇಷವಾಗಿ ದಾಂಪತ್ಯ ಜೀವನದಲ್ಲಿ ಕುಟುಂಬ ಜೀವನದಲ್ಲಿ  ಎದ್ದು ಕಾಣುತ್ತದೆ. ಈ ಮಾನವೀಯ ಸಂಬಂಧಗಳಲ್ಲಿ ಮಹತ್ವದ್ದು ಎಂದರೆ ಕಾಮ. ಪ್ರೇಮ. ಶಾರೀರಿಕ ಅದಕ್ಕೂ ಹೆಚ್ಚಾಗಿ ಮಾನಸಿಕ ದೌರ್ಬಲ್ಯಗಳು. ಅವೂ ಕೂಡ ಎಷ್ಟೋ ಸಾರಿ ವಿವರಣೆಗೆ ಅತೀತ. ಆದರೂ ಅಷ್ಟೇ ಸಹಜ. ನೈಸರ್ಗಿಕ. ಈ ಎಲ್ಲ ಸಂಬಂಧಗಳು ರಂಗನಾಥ ಅವರ ಕೃತಿಯಲ್ಲಿ ಮನ ತಟ್ಟುವಂತೆ ಮೂಡಿ ಬಂದಿವೆ. ಕಾದಂಬರಿಯ ಪ್ರಧಾನ ಪಾತ್ರಗಳಾದ ಪರಮೇಶ್ವರ ಭಟ್ಟರು,  ಅನ್ನಪೂರ್ಣಮ್ಮ, ಮಹದೇವಸ್ವಾಮಿ, ಗಿರಿಜಕ್ಕ ಮುಂತಾದವರೆಲ್ಲರೂ ನಮ್ಮ ನಿಜ ಜೀವನದ ಪಾತ್ರಗಳ ಯಥಾವತ್ತಾದ ಪ್ರತಿಬಿಂಬಗಳು. ಅಂತಲೇ ಕಾದಂಬರಿ ಓದುಗರ ಮನಸ್ಸನ್ನು ಮುಟ್ಟುತ್ತದೆ. 

ವೆಂಕಜ್ಜಿಯದು ಅತಿ ಸಣ್ಣ ಪಾತ್ರ. ಆದರೆ ಅತಿ ಜೀವಂತ. ಇಂಥ ಅಜ್ಜಿಯರು ಬಹಳಷ್ಟು ಕಡೆ ಇದ್ದಾರೆ. ಎಲ್ಲರಿಗೂ ಬೇಕಾದವರು, ಯಾವಾಗಲೂ ಅವರ ಸಹಾಯಹಸ್ತ ಎಲ್ಲರಿಗೂ ಲಭ್ಯವಿರುತ್ತದೆ. ಇಂಥ ಒಬ್ಬರು ನನಗೆ ವೈಯಕ್ತಿಕವಾಗಿ ಗೊತ್ತು. ವಿಶೇಷವಾಗಿ ಪರಮೇಶ್ವರ ಭಟ್ಟರ ಲೈಂಗಿಕ ದುರ್ಬಲತೆ ಅವರ ಬಗ್ಗೆ ಅಯ್ಯೋ ಪಾಪ ಎನ್ನುವಂತೆ ಮಾಡುತ್ತದೆ. ರಂಗನಾಥ ಅವರು ಈ ದುರ್ಬಲತೆಯನ್ನು ಸಂಕ್ಷಿಪ್ತವಾಗಿ ಹೇಳಿ ಬೆಳೆಸಿಕೊಂಡು ಹೋಗಿರುವುದು ಕಾದಂಬರಿಯ ಮೌಲ್ಯವನ್ನು ಹೆಚ್ಚಿಸುತ್ತದೆ. 
 
ಯಾವುದೇ ಬರವಣಿಗೆಗೆ ಆಗಲಿ ಗಂಭೀರತೆ, ಉನ್ನತ ಮೌಲ್ಯಗಳು ಅತಿ ಮುಖ್ಯ. ಹಾಸ್ಯ ಲೇಖನಗಳೂ ಸಹ ಹಗುರವಾಗಬಾರದು. ಭೂಷಣವನ್ನು ಉಳಿಸಿಕೊಂಡು ಬರಬೇಕು. ಈ ಕಾದಂಬರಿಯಲ್ಲಿ ಅದು ಯಥೇಚ್ಛವಾಗಿ ಬಂದಿದೆ.
ಆದ್ದರಿಂದಲೇ ಈ ಕಾದಂಬರಿ ತಾನಾಗಿಯೇ ಸರಾಗವಾಗಿ  ಓದಿಸಿಕೊಂಡು ಹೋಗುತ್ತದೆ. 

ಮತ್ತೆ ಗೊರೂರು ಅವರನ್ನು ಉಲ್ಲೇಖಿಸುವುದಾದರೆ ಅವರು ಹೇಳುವಂತೆ ಸರಾಗತೆಯ ಜೊತೆಗೆ ಸುಲಲಿತತೆ, ವಾಸ್ತವತೆ ಇವು  ಕಾದಂಬರಿಯ ಪ್ರಮುಖ ಗುಣಲಕ್ಷಣಗಳು ಎಂದು ಹೇಳಬಹುದು. ಕಾದಂಬರಿಯ ಇನ್ನೊಂದು ವಿಶೇಷ. ಅದರ ಕಾವ್ಯಮಯತೆ. ಅಲ್ಲಲ್ಲಿ ನಿಸರ್ಗದ ವರ್ಣನೆ. ನಿಸರ್ಗದೊಡನೆ ತುಲನೆ. ಇದು ಕಾದಂಬರಿಯ ಗುಣಗಳನ್ನು ಹೆಚ್ಚಿಸಿದೆ. ನಿಜ. ಆದರೆ...
ಕೆಲವೊಮ್ಮೆ ಅತಿಯಾಯಿತೇನೋ ಅನಿಸುತ್ತದೆ. ಇನ್ನೂ ಇತಿಮಿತಿಯಲ್ಲಿರಬೇಕಿತ್ತು ಎಂದು ನನ್ನ ಅನಿಸಿಕೆ. ಅದರಿಂದ ಆವಾಗ ಈವಾಗ ಓದುಗರಿಗೆ ಸಂದಿಗ್ಧವಾಗುವ ಸಾಧ್ಯತೆ ಇದೆ.

ಹಾಗೆಯೇ ಇನ್ನೂ ಒಂದು ವಿಚಾರ. ಯಾವುದೇ ಕಥೆಗೆ ಜೀವಾಳವೆಂದರೆ ಸಂಭಾಷಣೆ. ಪಾತ್ರಗಳು ನೇರವಾಗಿ ತಮ್ಮನ್ನು  ತಾವೇ ಅಭಿವ್ಯಕ್ತಿಗೊಳಿಸಿಕೊಳ್ಳುವುದು. ಆದರೆ ಇಲ್ಲಿ  ಸ್ವಲ್ಪ ಮಟ್ಟಿಗೆ ಅದರ ಕೊರತೆಯಿದೆ. ಪಾತ್ರಗಳಿಗಿಂತ ಹೆಚ್ಚಾಗಿ ಲೇಖಕರೇ ಮಾತನಾಡುತ್ತಾರೆ. ಕಥೆಗಿಂತಲೂ ಹೆಚ್ಚಾಗಿ ಪ್ರಬಂಧವಾಗಿದೆ. ಇದರಿಂದ ಕಥೆಯ ಓಟ ಕುಂಠಿತವಾಗುತ್ತದೆ. ಕಥೆ ಅಗತ್ಯವಿದ್ದಷ್ಟು ಸರಾಗವಾಗುವುದಿಲ್ಲ.

ಇಷ್ಟಾಗಿಯೂ ಇದೊಂದು ಉತ್ತಮ ಓದಿಸಿಕೊಂಡು ಹೋಗುವ ಕೃತಿ.  ನನ್ನ ಆತ್ಮೀಯ ಮಿತ್ರ ರಂಗನಾಥ ಅವರಿಗೆ ನನ್ನ ಹೃತ್ಪೂರ್ವಕ  ಅಭಿನಂದನೆಗಳು.

- ಸಿ ಟಿ ಜೋಷಿ,
ಹಿರಿಯ ಪತ್ರಕರ್ತರು ಹಾಗೂ ಗ್ರಂಥಕರ್ತರು,
ಬೆಂಗಳೂರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ